•  
  •  
  •  
  •  
Index   ವಚನ - 118    Search  
 
ಅರುವತ್ತಾರು ಕೋಟಿ ಬಂಟರು ಹೆಚ್ಚಿ ಬಾಳಲಿಕೆ ಸತ್ತರೆಂದೆನಿಸಿದೆ. ಅಟ್ಟೋಗರವನವರ ಹೆಂಡೆಯ ಕೂಳಿಗಿಕ್ಕಿಸಿದೆ. ನಾನುಂಬುದೇನು ಹೇಳಾ, ಕಪಿಲಸಿದ್ಧಮಲ್ಲಿನಾಥಾ, ನೀನೊಬ್ಬನೆಯಾದೆ.
Transliteration Aruvattāru kōṭi baṇṭaru hecci bāḷalike sattarendeniside. Aṭṭōgaravanavara heṇḍeya kūḷigikkiside. Nānumbudēnu hēḷā, kapilasid'dhamallinātha, nīnobbaneyāde.