•  
  •  
  •  
  •  
Index   ವಚನ - 123    Search  
 
ಅಷ್ಟಮ ಬ್ರಹ್ಮಕ್ಕೆ ಪಟಗಟ್ಟಿತ್ತು, ಮಾತೆ ಹೆತ್ತು ಹೆಸರಿಟ್ಟಿತೈ, ಅಕ್ಷರಾಂಕ ಆರುವನು ಐದುವನು ಮೇಲಪ್ಪ ಮೂರುವನು ಕೂಡೆ ಹದಿನಾಲ್ಕರೊಳು ಲೋಕವಾಗೆ; ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ಅನಾದಿ ಮುಖಶೂನ್ಯವಾಗಿಪ್ಪ ಲಿಂಗವನು ಖ್ಯಾತಿ ಮಾಡಿದ ಬಸವ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Aṣṭama brahmakke paṭagaṭṭittu, māte hettu hesariṭṭitai, akṣarāṅka āruvanu aiduvanu mēlappa mūruvanu kūḍe hadinālkaroḷu lōkavāge; ēkaika rudra ninnākāra catuṣṭayake anēka pariyiṁ māte basavākṣara. Anādi mukhaśūn'yavāgippa liṅgavanu khyāti māḍida basava, kapilasid'dhamallikārjunayya.