ಅಳಿಯ ಬಂದಾನೆಂಬರಯ್ಯ,
ಎಲ್ಲವ ನೀನೀಗಳೀವೆಯಾಗಿ.
ಅಳಿಯನಿದ್ದಹರೆಂಬರಯ್ಯ,
ಅಳಿಯದಂತೆ ನೀನಿಪ್ಪೆಯಯ್ಯಾ.
ಇದೆಲ್ಲವನಳಿದು ನೀನುಳಿದೆಯಯ್ಯಾ,
ಎನ್ನ ಕಪಿಲಸಿದ್ಧಮಲ್ಲಿನಾಥ ನೀನೊಬ್ಬನಯ್ಯಾ.
Transliteration Aḷiya bandānembarayya,
ellava nīnīgaḷīveyāgi.
Aḷiyaniddaharembarayya,
aḷiyadante nīnippeyayya.
Idellavanaḷidu nīnuḷideyayya,
enna kapilasid'dhamallinātha nīnobbanayyā.