•  
  •  
  •  
  •  
Index   ವಚನ - 132    Search  
 
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮಲಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರದಿ ಸರದಿಯ ಮೇಲೆ ಉತ್ಕೃಷ್ಟದಾ, ಐಲೋಕದಿಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡೆದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದಲಿ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ājyalōkadalli abale amr̥takoḍanane hottu sadamalajñāniyāgi taṁ rūpinā dāye dāyava nuṅgi baṇṇa baṇṇava nuṅgi saradi saradiya mēle utkr̥ṣṭadā, ailōkadiṁ mēle ā koḍananiḷuhalke koḍanoḍedu atyanta pravāhada nuḍiya gaḍaṇava mīri akṣaradvayadali mr̥ḍanoḍane ōlāḍide, kapilasid'dhamallikārjunā.