ಆದಿ ಅಕ್ಷರದಾನು ಭೇದಕ್ಕೆ ಅರಿಯನು,
ಆದರಿಂದಲಾದ ಬಿಂದುಗಳೆಲ್ಲ ಅನ್ನರೂಪು.
ಆಮೋದದಕ್ಷರದ ಭೇದವನು
ಅರುಹಿದಾತನೆ ಗುರುವಕ್ಕು
ಅಯ್ಯಾ, ಶ್ರೀ ಗುರುವೆ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ādi akṣaradanu bhēdakke ariyanu,
ādarindalāda bindugaḷella annarūpu.
Āmōdadakṣarada bhēdavanu
aruhidātane guruvakku
ayya, śrī guruve
kapilasid'dhamallikārjunā.