ಆದಿ ಮಧ್ಯಾವಸಾನದ ನಾದ ಭವಿಸಿತಯ್ಯ,
ಬ್ರಹ್ಮನಾದವೆ ಆನಂದವಾಗಿ. ಆಮೋದದಾ ನಾದ
ನಿನ್ನ ಆದಿಯ ರೂಪಾಗಲಿಕೆ ನಾನು ಬೆರಗಾದೆ ಕಂಡಾ,
ಅಭೇದ್ಯನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನಿಮ್ಮ ನಾಮದಲ್ಲಿ ಲೀಯವಾದೆ.
Transliteration Ādi madhyāvasānada nāda bhāvitayya,
brahmanādave ānandavāgi. Āmōdada nāda
ninna ādiya rūpāgalike nānu beragāde kaṇḍā,
abhēdyane kapilasid'dhamallikārjunayya
nim'ma nāmadalli līyavāde.