ವಚನ - 172     
 
ಆನಂದಸ್ಥಾನ ಅಪರಸ್ಥಾನ ಮಧ್ಯಮಸ್ಥಾನದ ಭೇದಂಗಳ ಹೇಳುವೆ: ಆನಂದಕ್ಕೆ ಅನೇಕ ಪರಿಯ ಬಣ್ಣ, ಅರುವತ್ತೆಸಳಿನ ಕಮಳ, ಹದಿನಾರಕ್ಷರ ವಿಪರೀತ, ಬಹುಶ್ರುತನೆಂಬಾತನಧಿದೇವತೆ. ಅಪರಸ್ಥಾನದಲ್ಲಿ ಅಕ್ಷರವೆರಡರ ಸಿಂಹಾಸನ, ಆದಿಮಧ್ಯಸ್ಥಾನವಿಲ್ಲದ ಕಮಲವೊಂದು ಎಸಳು ಎರಡು ಅಪರಸ್ಥಾನಕ್ಕೆ ಅಜಲೋಕಪರಿಯಂತ ವೇಧಿಸುತಿಪ್ಪ ಕಮಳ ಶುದ್ಧ ಸ್ಫಟಿಕ ಸಂಕಾಶವರ್ಣ ಅವ್ವೆಯ ಆಂದೋಳದ ಕ್ರಿಯಾಕಾರ ತ್ವಮಸಿಯೆಂಬ ನೀಲಾಸಂಗಮ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅಧಿದೇವತೆ.