ವಚನ - 173     
 
ಆನಂದಸ್ಥಾನದಲ್ಲಿ ಅರ್ಪಿತವಾರರಲ್ಲಿ ಅರ್ಪಿಸುವ ಭೇದ; ಅನಿಮಿಷವೆಂಬ ಆನಂದಸ್ಥಾನದಲ್ಲಿ ನಿತ್ಯಾರ್ಪಿತದ ತೃಪ್ತಿಯ ಭೇದ; ಸಂಯೋಗ ಸಮನಿಸಿ ಅರ್ಪಿಸುವ ಮುಖದಲ್ಲಿ ಆರುವಿಧದಾನಂದ. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಪಂಚೇಂದ್ರಿಯಂಗಳ ಭೇದವಲ್ಲದೆ, ಲಿಂಗಪ್ರಾಣವ ಮಾಡಿ ನಿಜಪ್ರಸಾದವ ನೆಲೆಗೊಳಿಸುವ ಭೇದ; ಅರುವತ್ತುನಾಲ್ಕು ಅನುಬಂಧಂಗಳಿಂದವೆ ನೂರೆಂಟು ಕರಣಂಗಳಲ್ಲಿ ಸ್ವಾದಿಸುವ ಸುಖಿಸುವ ಭೇದವನಾರು ಬಲ್ಲರಯ್ಯಾ? ದೀಕ್ಷೆಯಲ್ಲಿ ದಿವ್ಯಜ್ಞಾನಿ, ಶಿಕ್ಷೆಯಲ್ಲಿ ಸಮ್ಯಗ್‍ಜ್ಞಾನಿ, ಸ್ವಾನುಭಾವದಲ್ಲಿ ತಾನೆ ರೂಪು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಅವಗ್ರಹಿಸಿದ ಪ್ರಸನ್ನಪ್ರಸಾದಿಯ ಆರು ಬಲ್ಲರಯ್ಯಾ, ನೀನು ನಿನ್ನ ಶರಣರಲ್ಲದೆ?