ವಚನ - 177     
 
ಆ ನಿಮ್ಮ ನೆನೆಯಲು ಪೋಪೆನೆಂದಡೆ ತಾನೆನ್ನ ಕೈವಿಡಿದು ಇದ್ದೆಸೆಗಂ ಕೈದೋರ್ಪಳು. ಈ ಆಸೆಯಿಂದವೆ ನಿಮ್ಮೆಡೆಗಾಣೆನು. ಈ ಆಸೆಯೆಂಬವಳನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಾ.