ಆರಾದಡೆನ್ನುವನು ಹೊಗಳಿದುದನು
ಆ ಕಾಲದಲ್ಲಿಯೆ ನೆನವುತಿಪ್ಪುದು.
ಆ ಕಾಲದಲ್ಲಿ ಎನ್ನ ಜರಿದವರ
ಆ ಕಾಲದಲ್ಲಿ ಪ್ರಾಣವಧೆ ಮಾಡಿಹೆನೆಂಬುದು.
ಅಯ್ಯೋ, ಸಂಸಾರ ಮಾಯಾ ಮನಕಂಜುವೆನು,
ಅಯ್ಯ ನೀ ಕೂಡಿಕೊ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ārādaḍennuvanu hogaḷidudanu
ā kāladalliye nenavutippudu.
Ā kāladalli enna jaridavara
ā kāladalli prāṇavadhe māḍ'̔ihenembudu.
Ayyō, sansāra māyā manakan̄juvenu,
ayya nī kūḍiko
kapilasid'dhamallikārjunā.