•  
  •  
  •  
  •  
Index   ವಚನ - 205    Search  
 
ಆರೂಢದೈಕ್ಯವನು ತೋರಿಪ್ಪ ಸೀಮೆಯನು ಮೀರಿಪ್ಪುದೊಂದು ಬಿಂದುರೂಪು. ಬಿಂದುಗಳು ಕಳೆಗಳನು ಸಂಧಿಸುವ ಭೇದವನು ಚಂದ್ರಮಂಡಲದಲ್ಲಿಯೊಪ್ಪಿ ತೋರೆ ಆನಂದದಕ್ಷರಂಗಳ ಛಂದವಿದೆಂದಡೆ ಹಿಂದುಮುಂದುಗೆಡುವ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ārūḍhadaikyavanu tōrippa sīmeyanu mīrippudondu bindurūpu. Bindugaḷu kaḷegaḷanu sandhisuva bhēdavanu candramaṇḍaladalliyoppi tōre ānandadakṣaraṅgaḷa chandavidendaḍe hindumundugeḍuva kapilasid'dhamallikārjunā.