ಆರೇನು ಮಾಡಿದುದನಂತಿರೆ,
ಅಂತಕ್ಕು ಇಂತಕ್ಕುಯೆಂತಕ್ಕುಯೆನಬೇಡ.
ಚಿಂತಿಸದಿರು ಎಲೆ ಮನವೆ,
ಅಂತಕಹರ ಕಪಿಲಸಿದ್ಧಮಲ್ಲಿನಾಥಯ್ಯ
ಮಾಡಿದಂತಲ್ಲದೆ ತಾನು ಅಪ್ಪುದಿಲ್ಲ.
Transliteration Ārēnu māḍidudanantire,
antakku intakkuyentakkuyenabēḍa.
Cintisadiru ele manave,
antakahara kapilasid'dhamallināthayya
māḍidantallade tānu appudilla.