•  
  •  
  •  
  •  
Index   ವಚನ - 210    Search  
 
ಆ ಲಿಂಗವತ್ಯಂತ ಉನ್ನತೋನ್ನತವಪ್ಪ ಭಾವಿಸುವ ಭಾವಕ್ಕೆ ಇಂಬುಗೊಡನು ಆವಾವ ಪರಿಯಲ್ಲಿ ನೋಡಿ ಕೂಡುವಡವರ್ಗೆ ನಾಮವಿಲ್ಲದೆ ರೂಪಿನಿರವು ಇಲ್ಲ ಶ್ರೀಗುರು ಚೆನ್ನಬಸವಣ್ಣನಾಜ್ಞೆಯಲಿ ಎನ್ನ ಕರಸ್ಥಳಕ್ಕೆ ನಾಮರೂಪಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ā liṅgavatyanta unnatōnnatavappa bhāvisuva bhāvakke imbugoḍanu āvāva pariyalli nōḍi kūḍuvaḍavarge nāmavillade rūpiniravu illa śrīguru cennabasavaṇṇanājñeyali enna karasthaḷakke nāmarūpateyayya, kapilasid'dhamallikārjunā.