ಆವ ಕಳೆಯೆಂಬುದು ನೀನೆಯಾದೆ, ಬಸವಲಿಂಗವೆ.
ಮುಕ್ತಿಗೆ ಮೂಲಸ್ವರೂಪು ನೀನಾಗಿ ನಿಂದ ರೂಪು.
ನಿನ್ನ್ಲಲ್ಲಿಯೆ ತಲ್ಲೀಯವಾಯಿತ್ತು, ಬಸವಗುರುವೆ.
ನಿಯಮಾಚಾರದ ರೂಪು ನಿನ್ನ್ಲಲ್ಲಿಯೆ ತಲ್ಲೀಯವಾಯಿತ್ತಯ್ಯಾ,
ಕಪಿಲಸಿದ್ಧಮಲ್ಲಿನಾಥನ ಗುರು ಬಸವಾ.
Transliteration Āva kaḷeyembudu nīneyāde, basavaliṅgave.
Muktige mūlasvarūpu nīnāgi ninda rūpu.
Ninnlalliye tallīyavāyittu, basavaguruve.
Niyamācārada rūpu ninnlalliye tallīyavāyittayyā,
kapilasid'dhamallināthana guru basavā.