ವಚನ - 225     
 
ಆವುದೊಂದು ಸುಖವು ದೇವಾ, ನಿಮ್ಮಿಂದ ಕಾಣಬಂದಿತ್ತಯ್ಯಾ. ಇದನರಿದ ಮೇಲೆ, ಇನ್ನಾವ ಪರಿಯಲ್ಲಿ ನಿಮ್ಮಡಿಯ ಬಿಡುವೆನೆ? ಅಯ್ಯಾ, ದೇವದೇವಾ, ಕರುಣಿಸಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.