ವಚನ - 226     
 
ಆಸನ ಸ್ಥಿರವಾಗಿ ಆಧಾರಮಂ ಬಲಿದು, ಅಧೋಮುಖದ ವಾಯುವನೂರ್ಧ್ವಮುಖಕ್ಕೆ ತಿದ್ದಿ ಅತ್ತಿತ್ತ ಒಲೆಯದೆ, ನೆಟ್ಟನೆ ಕುಳ್ಳಿರ್ದು, ತೊಟ್ಟೆವೆ ಮಿಡುಕದೆ, ಅಟ್ಟೆಯ ಹಂಗಳಿದು, ಕರವೆರಡ ತಿರ್ಯಕವಾಗಿರಿಸಿ, ಶಿರವ ಸುಸರವಂ ಮಾಡಿ ದಿನಕರ-ಹಿಮಕರ-ವಾಯುಸಖರ ಮೇಲೆ ಶಿಖಿ ಶಶಿ ರವಿಕೋಟಿಕೋಟಿಯ ಬೆಳಗಿನ ಸಿಂಹಾಸನದಲ್ಲಿ ಒಪ್ಪಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆನೆದು ಸುಖಿಯಾದೆನು.