ಇಂತಪ್ಪ ಘನತರಲಿಂಗವ
ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು
ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ,
ಪಾದೋದಕ ಪ್ರಸಾದವ ಕೊಳ್ಳದೆ,
ಯೋಗವೆಂದು ಅದ್ವೈತವೆಂದು ಭಂಡನೆ ಬಳಸುತಿಪ್ಪ
ಮಿಟ್ಟೆಯ ಭಂಡರನೇನೆಂಬೆನೈ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Intappa ghanataraliṅgava
karasthaladalli bijayaṅgeysikoṇḍu
gurutōrida sadbhaktikrīyallirade,
pādōdaka prasādava koḷḷade,
yōgavendu advaitavendu bhaṇḍane baḷasutippa
miṭṭeya bhaṇḍaranēnembenai
kapilasid'dhamallikārjunā.