ಆಳುವ ಅರಸನಾ ಹೆಂಡತಿಯ
ಹಾದರಗಿತ್ತಿಯೆಂದಡೆ
ಆಳುವ ಅರಸು ಕೈಕಾಲನು ತರಿಸದೆ ಬಿಡುವನೆ?
ಶರಣಸತಿ ಲಿಂಗಪತಿಯಪ್ಪ
ಶಿವಭಕ್ತನ ಅಂತವನಿಂತವನೆಂದಡೆ,
ಅಘೋರ ನರಕದಲ್ಲಿಕ್ಕುವನವ್ವಾ,
ನಮ್ಮ ಕಪಿಲಸಿದ್ಧಮಲ್ಲಿನಾಥ.
Transliteration Āḷuva arasanā heṇḍatiya
hādaragittiyendaḍe
āḷuva arasu kaikālanu tarisade biḍuvane?
Śaraṇasati liṅgapatiyappa
śivabhaktana antavanintavanendaḍe,
aghōra narakadallikkuvanavvā,
nam'ma kapilasid'dhamallinātha.