ವಚನ - 237     
 
ಇಂಬಪ್ಪ ಶರಧಿಯ ಸಂಭ್ರಮದ ಮೊರಹಿನಲಿ ಶಂಭುವೆ, ನಿನ್ನನೊಡಗೂಡಿದೆನಯ್ಯಾ. ಬೇರೊಂದ ಕೇಳೆ, ಬೇರೊಂದ ಕಾಣೆ. ಮಹಾ ಉಲುಹೆ ಒಡಮನೆಯಾದೆನಯ್ಯಾ. ಅನಿಮಿಷನೆಂಬ ಶರಧಿಯ ಮಹಾ ಉಲುಹಿನಲಿ ಉಲುಹುಗೆಟ್ಟೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನೀನೆಂಬೆ ಸಮುದ್ರದಲಿ ಆನಿದ್ದೆನು.