ಇದಿರಿಂಗೆ ಕಿಂಕರನಾಗಿ ತನ್ನ ದೇಹಗುಣವಡಗಬಲ್ಲಡೆ,
ಅಲ್ಲಿರ್ಪ ಆ ಮಹಾಮಹಿಮನ ನಿಜವ ಕೂಡಿ
ಗಡಣದಲ್ಲಿರ್ಪಾತ್ಮನ ಕೂಡೆ ಆಡುತಿಪ್ಪನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನದೇವರ
ದೇವರು ಭಕ್ತದೇಹಿಕನಾಗಿ.
Transliteration Idiriṅge kiṅkaranāgi tanna dēhaguṇavaḍagaballaḍe,
allirpa ā mahāmahimana nijava kūḍi
gaḍaṇadallirpātmana kūḍe āḍutippanayyā,
kapilasid'dhamallikārjunadēvara
dēvaru bhaktadēhikanāgi.