ಇದು ಪುಣ್ಯ, ಇದು ಪಾಪವೆನ್ನದೆ ಆಸೆ ಮಾಡುತಿಪ್ಪಳು.
ಆ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು.
ಈ ಆಸೆಯೆಂಬವಳನೆಂದಿಂಗೆ ನೀಗಿ,
ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Idu puṇya, idu pāpavennade āse māḍutippaḷu.
Ā āseyembavaḷindave nim'meḍegāṇadippenu.
Ī āseyembavaḷanendiṅge nīgi,
endu nim'manoḍagūḍi bērāgadendippeno
kapilasid'dhamallikārjunā.