ವಚನ - 253     
 
ಇವರೆಂದ ಮಹಾವಸ್ತುವಿನ ಪ್ರಮಾಣವನರಿದೆ, ಶುದ್ಧವಿದೆಂದರಿದೆ, ಪಾದೋದಕ ಪ್ರಸಾದ ಭಕ್ತಿಯೆಂಬ ನಿಶ್ಚಯವನರಿದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಪರತತ್ವವನರಿದೆ ಇವರಿಂದ.