Index   ವಚನ - 252    Search  
 
ಇವನ ಪರಿಯ ಗಂಡುಗೂಸು ಪೃಥುವಿಯ ಮೇಲಿಲ್ಲವಯ್ಯಾ, ಅವ್ವಾ, ಗಂಡುಮಕ್ಕಳು ಗಂಡುಬೇಟಗೊಂಬರು. ಹೆಮ್ಮಕ್ಕಳು ಹೆಂಬೇಟಗೊಂಬರು. ಇವಗೆ ಕೂರದವರಾರು? ಹೇಳಾ! ಅವ್ವಾ! ಅಯ್ಯಾ! ಜಗದ ಗಂಡರ ಹೆಂಡಿರು ಇವನ ಮೇಲೆ ಮೂಗೂರಿಕೊಂಡಿಪ್ಪರು, ಕಪಿಲಸಿದ್ಧಮಲ್ಲಿನಾಥಯ್ಯನವ್ವಾ.