ಎಂಟು ಬೆಟ್ಟದ ಮೇಲೆ ಸುಡೆಯರು ಬಂದು,
ನಂಟುಗಂಡೆವೆಂದು ವರ್ಗಂಗಳಾ
ಕಂಠಸ್ವರದಿಂದವೆ ಮಧುರಗೀತವ ಮಾಡೆ,
ನಂಟು ಮುರಿಯಿತ್ತೀಗ ಆ ಪರಲೋಕ.
ತನುತ್ರಯದ ಮಲತ್ರಯವ ಸುಟ್ಟು
ಲಿಂಗತ್ರಯವ ನೆಲೆಗೊಳಿಸಿದಾತ
ಗುರು ಕಪಿಲಸಿದ್ಧಮಲ್ಲಿಕಾರ್ಜುನ.
Transliteration Eṇṭu beṭṭada mēle suḍeyaru bandu,
naṇṭugaṇḍevendu vargaṅgaḷā
kaṇṭhasvaradindave madhuragītava māḍe,
naṇṭu muriyittīga ā paralōka.
Tanutrayada malatrayava suttu
liṅgatrayava nelegoḷisidāta
guru kapilasid'dhamallikārjuna.