ಎಂತೆಂತು ನೋಡಿದಡೀ ಮನವು
ಸಂತವಿಡಲೀಯದಯ್ಯಾ.
ನಿಮ್ಮಯ ಚಿಂತೆಗೆ ಒಳಗಾಗದೆ
ದೆಸೆದೆಸೆವರಿವುದು,
ಕಾಮಕಿಚ್ಚೈಸೂದು,
ಕ್ರೋಧಕಿಚ್ಚೈಸೂದು,
ಆಮಿಷ ತಾಮಸಕ್ಕೆ ತಾನೆ ಮುಂದಾಗಿಪ್ಪುದು.
ಇದ ಮೂಲನಾಶವ ಮಾಡೆ
ನೀ ಮುಂದಾಗಯ್ಯ ತಂದೆ
ಕಪಿಲಸಿದ್ಧಮಲ್ಲಿಕಾರ್ಜುನ.
Transliteration Ententu nōḍidaḍī manavu
santaviḍalīyadayyā.
Nim'ma cintege oḷagāgade
desedesevarivudu,
kāmakiccaisūdu,
krōdhakiccaisūdu,
āmiṣa tāmasakke tāne mundāgippudu.
Ida mūlanāśava māḍe
nī mundāgayya tande
kapilasid'dhamallikārjuna.