ವಚನ - 296     
 
ಎನ್ನ ಸಕಲಕ್ಕೆ ಗುರು ಬಸವಣ್ಣ, ಎನ್ನ ನಿಃಕಲಕ್ಕೆ ಗುರು ಬಸವಣ್ಣ ; ಎನ್ನ ಸಕಲ ನಿಃಕಲ ಕೂಡಿದಾನಂದದಾದಿ ಪದವೆನಿತ ಆಗೆನಿಸಿ, ಪದವ ಮೀರಿದ ಸದಮಲಜ್ಞಾನಜ್ಯೋತಿರ್ಮಯನೈ. ಬಸವಣ್ಣನೇ ಶರಣು, ಬಸವಣ್ಣನೇ ಶರಣು. ಬಸವಣ್ಣನೇ ಭಕ್ತಿ ಮುಕ್ತಿಗೆ ಮೂಲವು. ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ, ಕಪಿಲಸಿದ್ಧಮಲ್ಲಿಕಾರ್ಜುನಾ.