Index   ವಚನ - 298    Search  
 
ಎನ್ನ ಹೊತ್ತಿಪ್ಪವಳ ನೆತ್ತಿಯ ಕಣ್ಣಿನಲ್ಲಿಪ್ಪ ಲಿಂಗವ ನಾನೆಚ್ಚತ್ತು ನೋಡುವ ತೆರನೆಂತಯ್ಯಾ. ನೋಡ ಹೋದಡೆ ನೆತ್ತಿ ಒಡೆದು ಕಣ್ಣಾಯಿತ್ತು. ನೋಡದಿರ್ದಡೆ ಎನಗವಳು ತೋರಳು. ಎನಗೆ ಕಾಬ ತೆರನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ.