ಏಕೋದೇವಾಯೆಂದು ಮನೆಮನೆದಪ್ಪದೆ
ಗಿರಿಯ ತಡಿಯ ಕಡಲ ಮುಡಿಯ ಜಡೆಯನೆಂಬರು.
ಅಯ್ಯಾ, ಎಂದಡಾನು ನಗುತ್ತಲಿರ್ದೆ,
ಆದಿ ಆಧಾರದಲ್ಲಿ ರೂಪುಯೆಂಟು ಇಲ್ಲದಂದು
ಹೆಸರು ನಿನಗೇನು ಹೇಳಾ?
ಕಪಿಲಸಿದ್ಧಮಲ್ಲಿಕಾರ್ಜುನಾ
ನೀನು ಆದಿಮುಖಶೂನ್ಯ ಕಾಣಾ.
Transliteration Ēkōdēvayendu manemanedappade
giriya taḍiya kaḍala muḍiya jaḍeyanembaru.
Ayyā, endaḍānu naguttalirde,
ādi ādhāradalli rūpuyeṇṭu illadandu
hesaru ninagēnu hēḷā?
Kapilasid'dhamallikārjunā
nīnu ādimukhaśūn'ya kāṇā.