ಏನಯ್ಯಾ, ಏನಯ್ಯಾ!
ಮಕ್ಕಳಿಗೆ ಜನಕರು ಕಾಡುವರೊ?
ನಾನು ಗುರುಸ್ಥಲಕ್ಕೆ ಯೋಗ್ಯನಲ್ಲ,
ಲಿಂಗಸ್ಥಲಕ್ಕೆ ಯೋಗ್ಯನಲ್ಲ,
ಜಂಗಮಸ್ಥಲಕ್ಕೆ ಯೋಗ್ಯನಲ್ಲ,
ನಾ ನಿಮ್ಮ ರಾಜಾಂಗಣದ ಕೂಲಿಕಾರ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ēnayya, ēnayyā!
Makkaḷige janakaru kāḍuvaro?
Nānu gurusthalakke yōgyanalla,
liṅgasthalakke yōgyanalla,
jaṅgamasthalakke yōgyanalla,
nā nim'ma rājāṅgaṇada kūlikāra,
kapilasid'dhamallikārjunā.