•  
  •  
  •  
  •  
Index   ವಚನ - 342    Search  
 
ಏನೆಂದೆನಲಿಲ್ಲದ ಅಖಂಡ ಪರಿಪೂರ್ಣ ಪರಮಾನಂದ ಪರಬ್ರಹ್ಮವು ತಾನೆಂಬ ಅರಿವಿನ ಬಲದ ಅಹಂಕಾರವಿಲ್ಲವಾಗಿ, ಅದ್ವೈತಿಯಲ್ಲ; ಉಭಯವಿಟ್ಟರಸುವ ಗಜೆಬಜೆಯಲ್ಲಿ ಸಿಲುಕನಾಗಿ, ದ್ವೈತಿಯಲ್ಲ. ಇಂತೀ ದ್ವೈತಾದ್ವೈತವೆಂಬ ಉಭಯನಾಮ ನಷ್ಟವಾದ ಅಭೇದ್ಯಮಹಿಮನ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣರೆ ಬಲ್ಲರು.
Transliteration Ēnembenalillada akhaṇḍa paripūrṇa paramānanda parabrahmavu tānemba arivina balada ahaṅkāravillavāgi, advaitiyalla; ubhayaviṭṭarasuva gajebajeyalli silukanāgi, dvaitiyalla. Intī dvaitādvaitavemba ubhayanāma naṣṭavāda abhēdyamahimana kapilasid'dhamallikārjunā, nim'ma śaraṇare ballaru.