ವಚನ - 353     
 
ಐದೆ ಬಿನ್ನಾಣಿಕೆ ಬಿನ್ನಾಣಿಯ ಬಸುರಲ್ಲಿ ಹುಟ್ಟಿದವಳು. ಬಾಯಲ್ಲಿ ಬಳೆದೊಟ್ಟವಳು; ಬಾಯಲ್ಲಿ ತಲೆಯಾದವಳು; ತಲೆಯೊಳಗೆ ಮೊಲೆಯಾದವಳು; ಮೊಲೆಯೊಳಗೆ ನಾಭಿಯಾದವಳು; ನಾಭಿಯೊಳಗೆ ಬಸುರಾದವಳು; ಬಸುರೊಳಗೆ ಬೆನ್ನಾದವಳು; ಬೆನ್ನೊಳಗೆ ಕಾಲಾದವಳು; ಗಂಡಂಗೆ ಕೈಯೆಂದು ಬಾಯಲ್ಲಿ ಹಿಡಿದು ಹರಿದವಳು ಕಪಿಲಸಿದ್ಧಮಲ್ಲಿನಾಥನ ಬಾಯಲ್ಲಿ ಭೋಗಿಯಾದವಳು. ಇಂತಪ್ಪ ವಿದ್ಯದ ಬೇಟದ ಮಾತಿನ ಕೊಂಬ ಹೇಳಿದಡೆ, ಅಲ್ಲಿಗೆ ಬಂದಡೆ ತಾ ಕಂಡಯ್ಯಾ, ಐದೆ ಬಿನ್ನಾಣಿಕೆ!