ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ;
ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ.
ವಾಯು ಬೀಸದ ಮುನ್ನ,
ಆಕಾಶ ಬಲಿಯದ ಮುನ್ನ,
ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ.
ಭೋಜನವ ಮಾಡಿ ಭಾಜನವನಿಕ್ಕಿಟ್ಟು
ಹೋಹ ಹಿರಿಯರಿಗೆ
ಭಂಗ ನೋಡಾ ಗುಹೇಶ್ವರಾ.
Transliteration Accaprasādi accaprasādi embiri kēḷirayyā;
niccakke nicca husiva husigaḷa kaṇḍevayyā.
Vāyu bīsada munna,
ākāśa baliyada munna,
liṅgakke arpitamukhava maredirayyā.
Bhōjanava māḍi bhājanavanikkiṭṭu
hōha hiriyarige
bhaṅga nōḍā guhēśvarā.
Hindi Translation श्रेष्टप्रसादी श्रेष्टप्रसादी कहनेवाले सुनो,
रोज रोज झूठ बोलने वालोंको देखा।
वायु बहने के पहले, आकाश बढ़ने के पहले,
लिंग को अर्पित मुख को करना भूले।
भोजनकर भाजन साफ़कर जानेवाले
वरिष्टों का नाश देखो गुहेश्वरा।
Translated by: Eswara Sharma M and Govindarao B N
Tamil Translation அச்சபிரசாதி அச்சபிரசாதி என்று கூறுவோர் கேண்மின்,
நாள்தோறும் பொய்யுரைப்பதைக் கண்டேன் ஐயனே,
வாயு வீசும் முன்னர், மூப்பு, மரணம் எய்தும் முன்னர்
இலிங்கத்திற்கு அர்ப்பிக்கும் சொரூபத்தை மறந்தீர் ஐயனே,
உணவை உண்டு, உண்ட தட்டினை வீசிச் சென்ற
பெரியோருக்குப் பயனேதுமில்லை குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಚ್ಚಪ್ರಸಾದಿ = ಶುದ್ಧ ಸಿದ್ಧ, ಪ್ರಸಿದ್ಧ-ಈ ಮೂರು ಪ್ರಸಾದಾಚರಣೆಗಳನ್ನು ನಿತ್ಯ ನಿತ್ಯ ಆಚರಿಸುವವ; ಆಕಾಶ = ಬಯಲು, ಜೀವಾತ್ಮ; ವಾಯು = ಕಾಲಮಾರುತ;
Written by: Sri Siddeswara Swamiji, Vijayapura