•  
  •  
  •  
  •  
Index   ವಚನ - 419    Search  
 
ಕರುಣರಸ ಹರಿವಲ್ಲಿ ಮಹಾಕಾರುಣ್ಯ ಸುಧಾಪ್ರವಾಹವಪ್ಪಲ್ಲಿ ಆರಯ್ಯಾ ನಿನ್ನನರಿವವರು? ಲೋಕಾದಿಲೋಕಂಗಳಿಗೆ ಏಕೋದೇವ ನೀನು ಅನಾದಿಮೂಲಕ್ಕೆ ಮೂಲಸ್ವಾಮಿ ನೀನೆ ಕಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karuṇarasa harivalli mahākāruṇya sudhāpravāhavappalli ārayyā ninnanarivavaru? Lōkādilōkaṅgaḷige ēkōdēva nīnu anādimūlakke mūlasvāmi nīne kaṇā, kapilasid'dhamallikārjunā.