Index   ವಚನ - 438    Search  
 
ಕಾಮಿಸಿದೆನಯ್ಯಾ ಬಸವಣ್ಣನ ಭಕ್ತಿಗೆ; ಕಾಮಿಸಿದೆನಯ್ಯಾ ಬಸವಣ್ಣನ ಯುಕ್ತಿಗೆ; ಕಾಮಿಸಿದ ಕಾಮವೆ ಕೈಸಾರಿತ್ತಯ್ಯಾ, ಬಸವಣ್ಣನ ಕರುಣದಿಂದ, ಕಪಿಲಸಿದ್ಧಮಲ್ಲಿನಾಥಯ್ಯಾ.