ಕಾಯದ ಕರಸ್ಥಳದಲ್ಲಿ ನೀನು
ಶೂನ್ಯನಾಗಿಪ್ಪೆಯಲ್ಲಾ, ಎಲೆ ಅಯ್ಯಾ.
ಆನಂದಸ್ಥಾನದಲ್ಲಿ ಅನಿಮಿಷನಾಗಿಪ್ಪೆ ಅಯ್ಯಾ.
ಆದಿಯಾಧಾರ ನಿನಗೆ ತಥ್ಯವಾಗಿಪ್ಪುದಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Kāyada karasthaḷadalli nīnu
śūn'yanāgippeyallā, ele ayyā.
Ānandasthānadalli animiṣanāgippe ayya.
Ādiyādhāra ninage tathyavāgippudayyā,
kapilasid'dhamallikārjunayya.