•  
  •  
  •  
  •  
Index   ವಚನ - 445    Search  
 
ಕಾಲಕರ್ಣಿಕೆಯನ್ನು ಮೀರಿಪ್ಪನೆಮ್ಮ ನಲ್ಲ ತೋರಿ ಬಿಡನಾಕೆಯ ಸಂಗಂಗಳಾ. ಕ್ರೀಗಳನು ನಿಃಕರಿಸಿ ನಿಃಕ್ರಿಯೆ ನೆಲೆಗೊಳಿಸಿ, ಆರು ವರ್ಗದಲಾತನೈಕ್ಯನಾಗಿ, ಸಂಬಂಧ ಸಮನಿಸಿಯು ಕರ್ಮವನು ಅತಿಗಳೆದು ಸೊಮ್ಮಾತನಿಹತತಾ ಪರತತ್ವದಾ ನಿಃಕರ್ಮಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಕರ್ಮದೊಳಗೆ ತಾ ಕರ್ಮಿಯಾದ.
Transliteration Kālakarṇikeyannu mīrippanem'ma nalla tōri biḍanākeya saṅgaṅgāḷā. Krīgaḷanu niḥkarisi nikriye nelegoḷisi, āru vargadalātanaikyanāgi, sambandha samanisiyu karmavanu atigaḷedu sōm'mātanihatatā paratatvadā niḥkarmi kapilasid'dhamallikārjunayyanemba karmadoḷage tā karmiyāda.