ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ,
ನಿಮ್ಮ ಭೇದಿಸುವರಾರು ಹೇಳಾ ಎಲೆ ಅಯ್ಯಾ.
ಎನ್ನ ಭವಕರ್ಮವು ಕಲೆಯಲಿಕೆ ಏಕರೂಪವಾಗಿ ಬಂದೆಯಯ್ಯಾ.
ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ,
ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ.
ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು
ನಾನಿಂದು ಕಂಡೆ ಕಾಣಾ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kālajñāni, karmavidūra, nityatr̥ptane,
nim'ma bhēdisuvarāru hēḷā ele ayyā.
Enna bhavakarmavu kaleyalike ēkarūpavāgi bandeyayya.
Nim'ma padagaḷu liṅgavāgi, nim'ma karaṇaṅgaḷe śrīguruvāgi,
nim'mūrutaramappa jihveya jaṅgamavāgi bandeyayya.
Nīnu śiṣya kāraṇa paraśivamūrtiyādanu
nānindu kaṇḍe kāṇā,
enna kapilasid'dhamallikārjunā.