•  
  •  
  •  
  •  
Index   ವಚನ - 451    Search  
 
ಕುಂಕುಮದ ಗಿರಿ ಕೊನೆಯೇರಿ ಬೆಳೆಯೆ, ಆಯತವಿಡಿದು ಸುಖವ ಕಂಡು ಅನುಭವದವಳಿಗೆ [ಪಚ್ಚವರ್ಣ] ಸುಖವನೇಕೀಕರಿಸಿ ನೋಡಲು ಆಯತವಾಯಿತ್ತಯ್ಯಾ ಕುಂಕುಮದ [ಹನ್ನೆರಡಸಳ] ಪೀಠ. ಆ ಪೀಠದಲ್ಲಿ ವೀರಭೃತ್ಯನೆಂಬವ ನಿಂದು, ಜಂಗಮವಿಡಿದು ನಡೆಯೆ, ಅನಿಲಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು, ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
Transliteration Kuṅkumada giri koneyēri beḷeye, āyataviḍidu sukhava kaṇḍu anubhavadavaḷige [paccavarṇa] sukhavanēkīkarisi nōḍalu āyatavāyittayyā kuṅkumada [hanneraḍasaḷa] pīṭha. Ā pīṭhadalli vīrabhr̥tyanembava nindu, jaṅgamaviḍidu naḍeye, anilaguṇa keṭṭu nelegoṇḍanayyā nim'ma śaraṇa cennabasavaṇṇanu, kapilasid'dhamallināthayya, cennabasavaṇṇaninda badukidenayyā.