ಗುರುವಿಂದನ್ಯ ದೈವವಿಲ್ಲೆಂಬುದಕ್ಕೆ
ಆಗಮವಾಣಿಯೆ ಸಾಕ್ಷಿ.
ಅದೆಂತೆಂದಡೆ:
``ಗುರುದೇವೋ ಮಹಾದೇವೋಗುರುದೇವಸ್ಸದಾಶಿವಃ|
ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರುವೆ ನಮಃ||
ಗುರುಃ ಶಂಭುರ್ಗುರುರ್ಜ್ಙಾನಂ ಗುರುರ್ಮಾತಾ ಗುರುಃ ಪಿತಾ|
ಗುರುರ್ಬಂಧುರ್ಗುರುಃ ಸಾಕ್ಷಾದ್ದೇವತಾಗಣಪುಂಗವಃ||
ಅನುಷ್ಠಾನಾದಿಕಾಂ ಪೂಜಾಂ ಯಃ ಕರೋತಿ ಗುರುಂ ವಿನಾ|
ಯಾತಿ ನೀಚಾನಿ ಜನ್ಮಾನಿ ತಸ್ಮಾದ್ಗುರುವರಂ ಭಜೇತ್||
ಷಣ್ಮಾಸೇ ವ್ಯಾಪಿ ವರ್ಷೇ ವಾ ವರ್ಷೇ ವಾ ದ್ವಾದಶಾತ್ಮಕೇ|
ಗುರೋರಾಲೋಕನಂ ಯಸ್ತು ನ ಕರೋತಿ ಸ ಪಾಪವಾನ್||"
ಎಂಬುದೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Guruvindan'ya daivavillembudakke
āgamavāṇiye sākṣi.
Adentendaḍe:
``Gurudēvō mahādēvōgurudēvas'sadāśivaḥ|
gurudēvātparaṁ nāsti tasmai śrīguruve namaḥ||
guruḥ śambhurgururjṅānaṁ gururmātā guruḥ pitā|
gururbandhurguruḥ sākṣāddēvatāgaṇapuṅgavaḥ||
anuṣṭhānādikāṁ pūjāṁ yaḥ karōti guruṁ vinā|
yāti nīcāni janmāni tasmādguruvaraṁ bhajēt||
ṣaṇmāsē vyāpi varṣē vā varṣē vā dvādaśātmakē|
gurōrālōkanaṁ yastu na karōti sa pāpavān||
embude pramāṇavayyā, kapilasid'dhamallikārjunayyā.