•  
  •  
  •  
  •  
Index   ವಚನ - 502    Search  
 
ಗುರುವೆ, ನಿಗಮಕ್ಕಭೇದ್ಯನೆ, ಅಕ್ಷರ ಮೂರರ ರೂಪನೆ, ಅಕ್ಷರ ಎರಡರ ನಿತ್ಯನೆ, ಅಕ್ಷರ ನಾಲ್ಕಕ್ಕೆ ಸಿಕ್ಕದನೆ, ಅಕ್ಷರ ಐದಕ್ಕಿಂದತ್ತಲಾದವನೆ, ಅಕ್ಷರ ಏಳ ಮೀರಿದವನೆ, ಅಕ್ಷರವಾರ ನೀ ಜರಿದವನೆ, ಅಕ್ಷರವಾರರ ರೂಪನೆ, ಆರರಕ್ಷರಕ್ಕೆ ಅನಾಮಯನೆ, ಅಕ್ಷರವೆಂಟರ ರೂಪನೆ, ಹದಿನಾರಕ್ಷರಕ್ಕೆ ಸಂಪೂರ್ಣನೆ, ಇವು ಮೊದಲಾದ ಅಕ್ಷರ ಹಲವನು ಏಕವ ಮಾಡಿ ತೋರಬಲ್ಲ ರೂಪನೆ, ಆನಂದಮಯನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ತೋರಿದ ಪರಮಗುರುವೆ.
Transliteration Guruve, nigamakkabhēdyane, akṣara mūrara rūpane, akṣara eraḍara nityane, akṣara nālkakke sikkadane, akṣara aidakkindattalādavane, akṣara ēḷa mīridavane, akṣaravāra nī jaridavane, akṣaravārara rūpane, ārarakṣarakke anāmayane, akṣaraveṇṭara rūpane, hadinārakṣarakke sampūrṇane, ivu modalāda akṣara halavanu ēkava māḍi tōraballa rūpane, ānandamayana kapilasid'dhamallikārjunayyana tōrida paramaguruve.