•  
  •  
  •  
  •  
Index   ವಚನ - 525    Search  
 
ಜಗದೊಳಹೊರಗೆ ನೀನಿಪ್ಪೆಯಯ್ಯಾ. ಇಪ್ಪ ನೆಲೆಯ ಹೋಹ ಗತಿಯ ಕಾಣಲಾರಿಗೆ ಬಾರದಯ್ಯಾ. ನೋಡ ನೋಡಲಿ ಅಡಗಿ ಹೋಹೆ ಎನ್ನ ಕಪಿಲಸಿದ್ಧಮಲ್ಲಿನಾಥಾ, ನೀ ಶೂನ್ಯನಯ್ಯಾ.
Transliteration Jagadoḷahorage nīnippeyayya. Ippa neleya hōha gatiya kāṇalārige bāradayyā. Nōḍa nōḍali aḍagi hōhe enna kapilasid'dhamallinātha, nī śūn'yanayyā.