•  
  •  
  •  
  •  
Index   ವಚನ - 524    Search  
 
ಜಗದೆರೆಯ ಮಾಡಿದನೊಂದು ಕುರಿಮರಿಯ. ಆ ಕುರಿಮರಿ ಮೇಯುತ್ತಿದೆ. ಸರ್ವಜಗದವರೆಲ್ಲ ಅನಂತರಕ್ಕಸರು ಹಿಂಸೆ ಮಾಡುತಲೈದಿದರು. ಹೋದ ರಕ್ಕಸರು ಸತ್ತರು: ಇದ್ದ ಕುರಿಮರಿ ಇದ್ದಂತಿಪ್ಪುದು! ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jagadereya māḍidanondu kurimariya. Ā kurimari mēyuttide. Sarvajagadavarella anantarakkasaru hinse māḍutalaididaru. Hōda rakkasaru sattaru: Idda kurimari iddantippudu! Idēnu kautuka kapilasid'dhamallikārjunā.