ಜಲದೊಳಗೆ ಮತ್ಸ್ಯ ಜಲವ ತನ್ನ ನಾಸಿಕದತ್ತ
ಹೊದ್ದಲೀಯದ ಪರಿಯ ನೋಡಾ ಅಯ್ಯಾ.
ಶರಣ ಸರ್ವಪ್ರಪಂಚಿನೊಳಗಿದ್ದು
ಆ ಪ್ರಪಂಚು ತನ್ನತ್ತ ಹೊದ್ದಲೀಯದ
ಪರಿಯ ನೋಡಾ ಅಯ್ಯಾ.
ಮತ್ಸ್ಯಂಗಾ ಬುದ್ಧಿಯ, ಶರಣಂಗೀ
ಬುದ್ಧಿಯ ಕರುಣಿಸಿದೆಯಲ್ಲಾ,
ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jaladoḷage matsya jalava tanna nāsikadatta
hoddalīyada pariya nōḍā ayya.
Śaraṇa sarvaprapan̄cinoḷagiddu
ā prapan̄cu tannatta hoddalīyada
pariya nōḍā ayyā.
Matsyaṅgā bud'dhiya, śaraṇaṅgī
bud'dhiya karuṇisideyallā,
enna kapilasid'dhamallikārjunā.