ತನುಮಧ್ಯ ಮಂಟಪದ ಒಳಗೆ ದಾಯಂಗೊಳಿಸಿ
ತನು ಮಲತ್ರಯವ ದಹಿಸಿ,
ಜ್ಯೋತಿರ್ಮಯ ಲಿಂಗವನು
ತನ್ನ ಮನದ ಕೊನೆಯಲ್ಲಿತ್ತ ಗುರು,
ಅದ ನಿಸ್ತಾರವೆಂದು ಹಿಡಿದ,
ಆದಿಯ ಇದಿರಲ್ಲಿ ಆಜ್ಞಾವಿಲೋಕನದ ಆನಂದ ಶಿಷ್ಯನು,
ಅಪ್ರಮಾಣನವ್ವಾ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Tanumadhya maṇṭapada oḷage dāyaṅgoḷisi
tanu malatrayava dahisi,
jyōtirmaya liṅgavanu
tanna manada koneyalli guru,
ada nistāravendu hiḍida,
ādiya idiralli ājñāvilōkanada ānanda śiṣyanu,
apramāṇanavvā kapilasid'dhamallikārjuna.