ಮನಬೀಸರವೆಂಬ ಗಾಳಿ ಬೀಸಿತ್ತು,
ವಿದ್ಯಾಮುಖದ ಜ್ಯೋತಿ ನಂದಿತ್ತು.
ಕತ್ತಲೆಯಲ್ಲಿ ಗತಿಯ ಕಾಣದೆ ದುಮ್ಮಾನ ನೆಲೆಗೊಂಡಿತ್ತು.
ಸುಮ್ಮಾನ ಹೋಯಿತ್ತು.
ಸಕಳಕಲಾವಿದ್ಯಾಗುರುವಲ್ಲಾ!
ಮತಿತಾಳವೆಂಬ ಗುಹ್ಯತಾಗಿ,
ಸುತಾಳವೆಂಬ ಶರಣಸಂಗದಲ್ಲಿ ಬಿದ್ದು,
ಗುರುವಿಂಗೆ ಪ್ರಸಾದವಾದುದು,
ಶಿಷ್ಯಂಗೆ ಓಗರವಾದುದು ನೋಡಾ!
ಲೌಕಿಕ ನಾಯಕನರಕ!
ಅರ್ಪಿತಮುಖವನರಿಯದೆ,
ಅನರ್ಪಿತಮುಖವಾಯಿತ್ತು ಗುಹೇಶ್ವರಾ.
Transliteration Manabīsaravemba gāḷi bīsittu,
vidyāmukhada jyōti nandittu.
Kattaleyalli gatiya kāṇade dum'māna nelegoṇḍittu.
Sum'māna hōyittu.
Sakaḷakalāvidyāguruvallā!
Matitāḷavemba guhyatāgi,
sutāḷavemba śaraṇasaṅgadalli biddu,
guruviṅge prasādavādudu,
śiṣyaṅge ōgaravādudu nōḍā!
Laukika nāyakanaraka!
Arpitamukhavanariyade,
anarpitamukhavāyittu guhēśvarā.
Hindi Translation मन नाश करनेवाली हवा बही थी।
विद्यामुखि ज्योति बुझी थी।
अंधकार में गति को न देख
दु:ख स्थिर हुआ था।
सुख चला गया।
सकल कला विद्यागुरु।
सुमति जैसे गुह्य लगने से,
सुताल जैसे शरण के अंग में पडकर,
गुरु को प्रसाद बना, शिष्य को आहार बना।
लौकिक नायक नरक।
अर्पित मुख न जाने अनर्पित मुख बना गुहेश्वरा।
Translated by: Eswara Sharma M and Govindarao B N
Tamil Translation மனத்தின் நிலை குலைக்கும் காற்று வீசியது,
விவேகத்தை நல்கும் ஒளியானது மறைந்தது,
இருளிலே கதியைக் காணாமல்
துயரமும் துன்பமும் நிலைகொண்டு
மனஅமைதி அகல்கிறது.
மஹாலிங்கப் பேரொளி ஞானங்களின் ஆதிகுருவன்றோ
பேரொளி சூட்சும அறிவைச் சூழ்கிறது.
தூயமனத்தில் இறங்கி நிறைகிறது
அது குருவிற்குப் பிரசாதம், சீடனுக்குப் படையலாம்,
உலகியல் துயரங்கள் கீழான நரகம்
பிரசாத மேன்மையையறியாது, உலகியலிலேயே
சுழலும் வண்ணமாயிற்று குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನರ್ಪಿತ ಮುಖ = ವಿಷಯೋಪಭೋಗ; ಅರ್ಪಿತ ಮುಖ = ಪ್ರಸಾದದ ಸ್ವರೂಪ, ಹಿರಿಮೆ; ಗುಹ್ಯ = ಸುಸೂಕ್ಷ್ಮ; ನಾಯಕ ನರಕ = ಘೋರವಾದ ಸಾಂಸಾರಿಕ ದುಃಖ; ಬೀಸರ = ಅಸ್ತವ್ಯಸ್ತ, ಮಲಿನ; ಮತಿತಾಳ = ಪರಿಶುದ್ದವಾದ ಮತಿ, ಸುಮತಿ; ಸುತಾಳ = ಸುಮನ, ಶುದ್ದವಾದ ಮನ;
Written by: Sri Siddeswara Swamiji, Vijayapura