ವಚನ - 598     
 
ತವಕಿಸುವಡೆ ತಾಮಸಿಯೆ? ಕೂಡುವಡೆ ಭೇದಿಯೆ? ಸಂದು ಸವೆದು ಒಂದಾದ ಬಳಿಕ ಕೂಡುವೆನೇನ? ತವಕಿಸುವೆನೇನ? ಉರುತರವಪ್ಪ ಲಿಂಗವ ಕರಸ್ಥಲದಲ್ಲಿ ಬಿಜಯಂಗೈಸಿಕೊಂಡು ತವಕಿಸಿ ಕೂಡಿಹೆನೆಂಬ ಜಡಮತಿಗಳ ಎನ್ನತ್ತ ತೋರದಿರಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.