•  
  •  
  •  
  •  
Index   ವಚನ - 599    Search  
 
ತಾಗಿತ ತಪ್ಪಿಸಬಹುದೆ? ಬಂದುದನತಿಗಳೆಯಬಾರದು. ಅಂದಂದಿಂಗೆ ಅಂದಂದಿಂಗೆ ಬಂದುದನುಂಬ ಕಾಲಕ್ಕೆ ಒಲ್ಲೆನೆಂದರೆ ಮಾಬುದೆ? ಒಡಲಿಗೊಂದು ವಿಧಿಯಾಗಿ ವಿಧಿಗೊಂದು ಒಡಲಾದ ಬಳಿಕ ನಿಜಗುರುವೆ ಸ್ವತಂತ್ರ ಕಪಿಲಸಿದ್ಧಮಲ್ಲಿನಾಥಾ ನಿನ್ನ ಕರಸ್ಥಲಕೆ ಓಡೇಕೆ!
Transliteration Tāgita tappisabahude? Bandudanatigaḷeyabāradu. Andandiṅge andandiṅge bandudanumba kālakke ollenendare mābude? Oḍaligondu vidhiyāgi vidhigondu oḍalāda baḷika nijaguruvē svatantra kapilasid'dhamallinātha ninna karasthalake ōḍalēke!