ನರಸಮುದ್ರವೆಂಬುದೊಂದು
ಕೊಳಚೆಯೊಳಗಣ ಚಿಕ್ಕ ಮಹಾಕೊಳಚೆಯೊಳಗೆ
ಅಯ್ಯಾ, ಲೋಕ ಬಿದ್ದು ತೇಂಕಾಡುತ್ತಿದೆ.
ಇದರಿಂದ ಹೊಲ್ಲ ;
ಕೈಯ ನೀಡು,
ಕಪಿಲಸಿದ್ಧಮಲ್ಲಿಕಾರ್ಜುನಾ, ನೀನು.
Transliteration Narasamudravembadondu
koḷaceyoḷagaṇa cikka mahākoḷaceyoḷage
ayya, lōka biddu tēṅkāḍuttide.
Idarinda holla;
kaiya nīḍu,
kapilasid'dhamallikārjunā, nīnu.