ವಚನ - 675     
 
ನಲ್ಲ! ನಿಮ್ಮ ಬೇಂಟ ವಿಷಮದ ಬೇಟವಯ್ಯಾ. ನಲ್ಲ! ನಿಮ್ಮ ಬಯಲಿಗೆ ಬೇಟಗೊಂಡೆನಯ್ಯಾ. ಅಯ್ಯಾ, ಅಕ್ಕಟಾ, ಇವಳೆನ್ನ ಸಬುದಕ್ಕೆ ಬೇಟಗೊಂಡಳೆಂದು ಕೂಡಿ ಕೂಡಿ ಕೂಡೈ ಎನ್ನ, ಕಪಿಲಸಿದ್ಧಮಲ್ಲೇಶ್ವರದೇವಾ.