ವಚನ - 690     
 
ನಿಜದ ಪ್ರಭೆ ನಿತ್ಯಪ್ರಕಾಶ ತೋರುತ್ತಿದೆ ಎನಗಯ್ಯಾ. ಮೂರ್ತಿಯಾಗಿದೆ ಎನ್ನ ಕಣ್ಣ ಮುಂದೆ ಅಯ್ಯಾ. ಇದರ ಪ್ರಭೆಯ ಕಂಡು ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ, ಕರುಣಿಸಯ್ಯಾ, ನಿಮ್ಮ ಧರ್ಮ.